ಮಂಗಳವಾರ, ಮಾರ್ಚ್ 23, 2010

ಅಮ್ಮಣ್ಣಿಯ ನೆನಪು


ನಿದ್ದೆ ಇರದ ರಾತ್ರಿಗಳಲ್ಲಿ
ಅವಳ ಹೆಜ್ಜೆಯ ಗುರುತಿತ್ತು
ನಿದ್ದೆ ಬಂದ ರಾತ್ರಿಯಂತೂ
ಅವಳ ಕನಸೇ ಬಿದ್ದಿತ್ತು...

ಹಾದಿ ಬದಿಯ ಒಂಟಿ ನಡಿಗೆ
ಆಕೆಯ ನೆನಪ ತರುತಿತ್ತು
ಆ ಮಲ್ಲಿಗೆ ನಗು ನೆನಪಾದಾಗ
ನನ ಕಾಲು ಕುಂಟುತಿತ್ತು...

ಕನ್ನಡಿ ಮುಂದೆ ನಿಂತರಂತೂ
ಅವಳ ಕಣ್ಣೇ ಕಾಣುತಿತ್ತು
ಕಣ್ಣು ನನದೇನೇ ಎಂದರಿತಾಗ
ತುಟಿಯ ಅಂಚು ನಗುತಿತ್ತು...

ತಟ್ಟೆಯಲ್ಲಿ ತುತ್ತು ಅನ್ನ
ಅವಳಿಗಾಗಿ ಮೀಸಲಿರ್ತಿತ್ತು
ಹಸಿವೆ ತುಂಬ ಸಹಿಸಲಾಗದೆ
ನನ್ನ ಹೊಟ್ಟೆ ಸೇರ್ತಿತ್ತು...

ಐಸ್-ಕ್ರೀಂ ಸವಿಯುವಾಗ
ಅವಳ ಗಲ್ಲದ ನುಣುಪಿತ್ತು
ಅದು ಮೆಲ್ಲನೆ ಕರಗಿದಾಗ
ಅಲ್ಲಿ ನನ್ನ ತುಟಿ ಇತ್ತು...

6 ಕಾಮೆಂಟ್‌ಗಳು:

  1. ವಿರಹಾಗ್ನಿ ಮುಗಿದ ಬಳಿಕ, ಈಗ ತಣ್ಣಗೆ ಕೊರೆಯುವ ನೆನಪುಗಳು! ಕವನ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಗಿರಿ, ಈ ಸಾಲುಗಳಂತೂ ಬಹಳ ಹಿಡಿಸಿದವು.....ಪೂರ್ತಿ ಕವನ ಬಹಳ ಸರಳ ಮತ್ತು ತೂಕದ್ದು....ಅಭಿನಂದನೆ

    ಐಸ್-ಕ್ರೀಂ ಸವಿಯುವಾಗ
    ಅವಳ ಗಲ್ಲದ ನುಣುಪಿತ್ತು
    ಅದು ಮೆಲ್ಲನೆ ಕರಗಿದಾಗ
    ಅಲ್ಲಿ ನನ್ನ ತುಟಿ ಇತ್ತು...

    ಪ್ರತ್ಯುತ್ತರಅಳಿಸಿ