ಕಣ್ಣಲ್ಲಿ ಸಣ್ಣಕ್ಕೆ ಎರಡು ಹನಿ ಇಳಿ ಬಿಟ್ಟು ತಂದೆಯವರನ್ನು ತಬ್ಬಿ ಹಿಡಿದಾಗ, ಅವರಿಗೆ ಅರ್ಥವಾಗುತ್ತಿತ್ತು... ಇದು ಶಾಲೆಗೆ ಹೊರಡಲಿಕ್ಕೆ ಹಿಂಜರಿಯುವ ಮನಸ್ಸಿನ ಮಿಡಿತ ಅಂತ...
"ಪುಟ್ಟಾ.. ಇರಲಿ ಬಿಡು.. ಪರ್ವಾಗಿಲ್ಲ... ಈವತ್ತು ಶಾಲೆಗೆ ಹೊಗ್ಬೇಡ..." ಅಂತ ಒಂದೇ ಮಾತಲ್ಲಿ ನನ್ನ ನೋವಿಗೆ ಸಾಂತ್ವನ ನೀಡ್ತಿದ್ರು... ೬ ವರ್ಷದ ನನಗೆ ಒಂದನೇ ತರಗತಿಯಲ್ಲಿ ಹೊಗಬೇಕಾದ್ರೆ

ನನಗೆ ಆ ಪ್ರೊಗ್ರೆಸ್ ರಿಪೋರ್ಟ್ ಸ್ಪಷ್ಟವಾಗಿ ನೆನಪಿವೆ... ಮೊದಲ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨ ನೇ ರಾಂಕ್.. ಎರಡನೇ ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ೨೨ ನೇ ರಾಂಕ್... ಮೊದಲ ಕ್ವಾರ್ಟರ್ಲಿಯ ರಾಂಕ್ ಎರಡು ಬಾರಿ(೨ -> ೨೨) ರಿಪೀಟ್ ಆದದ್ದು ಮಾತ್ರ ಕಾಕತಾಳೀಯ...! ಆದ್ರೆ ಕಾರಣ ಮಾತ್ರ, ನನ್ನ ಪ್ರತಿದಿನ ಶಾಲೆಗೆ ಹೋಗುವ ಮೊದಲು ಬರುತ್ತಿದ್ದ ಹೊಟ್ಟೆನೋವು...! ಅಯ್ಯೋ.. ಎಂಥ ಹೊಟ್ಟೆ ನೋವು ಅನ್ನಿ... ಬೆಳಿಗ್ಗೆದ್ದು ಬ್ರಶ್ ಮಾಡಿ, ಸ್ನಾನ ಮಾಡಿ, ಯುನಿಫೋರ್ಮ್ ತೊಟ್ಟು ತಿಂಡಿ ತಿನ್ನುವವರೆಗೆ ಇಲ್ಲದ್ದು ಆಮೇಲೆ ಇದ್ದಕ್ಕಿದ್ದಂತೆ ಬರುತ್ತಿತ್ತು...! ೧ ನೇ ತರಗತಿಯಲ್ಲಿ ಸುಮಾರು ೫೦% ಶಾಲಾ ದಿನಗಳನ್ನು ನಾನು ಮನೆಯಲ್ಲೇ ಕಳೆದಿರಬಹುದೇನೋ..!
ಅಕ್ಕನೋ, ನೀಟಾಗಿ ಜಡೆ ಬಾಚಿ ಸರಿಯಾದ ಟೈಮ್ ಗೇ ಹೊರಡುತ್ತಿದ್ದಳು. ಅಮ್ಮನಿಗೆ ಪುರುಸೊತ್ತಿದ್ರೆ ಅಕ್ಕನಿಗೆ ಎರಡು ಜಡೆ ಹಾಕ್ತಿದ್ರು, ಪುರುಸೊತ್ತಿಲ್ಲಾ ಅಂದ್ರೆ ಒಂದೇ. ಮನೆಯ ಅಂಗಳದಲ್ಲೇ ಬೆಳೆದ ಜಾಜಿ ಮಲ್ಲಿಗೆಯೋ ಇಲ್ಲ ಸೇವಂತಿಗೆಯೋ, ಗುಲಾಬಿ ಹೂವೋ, ಹಿಂದಿನ ದಿನವೇ ಮಾಡಿಟ್ಟ ಅಬಲಿಗೆ ಹೂವಿನ ಮಾಲೆಯೋ ಯಾವುದೋ ಒಂದು ಸಿಕ್ಕಿಸಿದರೆ ಆಯ್ತು. ದಾಸವಾಳದ ಹೂವು ಮರದ ತುಂಬಾ ಆಗ್ತಿದ್ರೂ ಅದನ್ನು ಮಾತ್ರ ಮುಡೀತಿರ್ಲಿಲ್ಲ. ಆದ್ರೆ ಹಣೆಯಲ್ಲೊಂದು ನೀಟಾದ ಲಾಲ್-ಗಂಧ(ಪುಟ್ಟದಾದ ಕೆಂಪು ಚುಕ್ಕೆ!) ಇರಲೇ ಬೇಕಿತ್ತು. ಇಲ್ಲಾಂದ್ರೆ ಅಮ್ಮ ಬಿಡ್ತಿರ್ಲಿಲ್ಲ...!
ತೀರಾ ಹಳ್ಳಿಯಾದ್ರಿಂದ ಶಾಲೆಗೆ ಹೋಗಬೇಕೆಂದ್ರೆ ಒಂದೂವರೆ-ಎರಡು ಕಿಲೋಮೀಟರ್ ನಡೆದು ಹೋಗಬೇಕಿತ್ತು. ಅಕ್ಕನ ಜೊತೆ ಅಕ್ಕಪಕ್ಕದ ಮನೆಯವರೊಂದಿಗೆ ಪುಟ್ಟ-ಪುಟ್ಟ ಹೆಜ್ಜೆ ಇಟ್ಟು ನಡೆದೇ ಹೊಗುತ್ತಿದ್ದೆ. ಆವಾಗ ಸಣ್ಣ ಸಣ್ಣ ವಿಷಯವನ್ನೂ ನೋಡಿ ಖುಷಿ ಪಟ್ಟಿದ್ದೀನಲ್ಲಾ.
ಹೊಸತಾಗಿ ತಂದ ಶರ್ಟ್, ಆ ಸಣ್ಣ ಚಡ್ಡಿ... ಅಹಾ... ಅದೆಷ್ಟು ದಿನ ಅದನ್ನು ಹಾಕ್ಕೊಂಡು ಖುಶಿಪಟ್ಟಿಲ್ವಾ...?
ಅ ಛತ್ರಿ, ಅದರ ಬಣ್ಣದ ಹಿಡಿ. ಅಹಾ.. ಆ ಮಳೆಗೆ ಅದನ್ನು ತಿರುಗಿಸುತ್ತಾ ಮಳೆಗೆ ಅರ್ಧ ನೆನೆದುಕ್ಕೊಂಡು ಹೋಗಿಲ್ವಾ...?
ಬಣ್ಣದ ಚಪ್ಪಲಿ. ಆಹಾ... ಅದನ್ನು ಹಾಕ್ಕೊಂಡು ಎಷ್ಟೊಂದು ಠೀವಿಯಿಂದ ನಡೆದಾಡಲಿಲ್ಲ?
ಕಡು ಹಸುರು ಬಣ್ಣದ ಆ ಬಾಗ್... ಅದರೊಳಗೆ ಗರಿ ಗರಿಯಾದ ಹೊಚ್ಚ ಹೊಸ ಪಾಠ ಪುಸ್ತಕಗಳು... ಆ ಬಳಪ.. ಚಾಕ್ ಪೀಸ್.. ಆ ಬಳಪ ಒರಸಿಕ್ಕೊಳ್ಳಲು ನಮ್ಮ ತೋಟದಲ್ಲಿ ಬೆಳೆಯುವ ಒಂದು ಜಾತಿಯ ನೀರು ಕಡ್ಡಿ ಎಂಬ ಹುಲ್ಲನ್ನು ತೆಗೆದುಕ್ಕೊಂಡು ಹೋಗುತ್ತಿದ್ದೆವು. ಆ ಹುಲ್ಲಿನಲ್ಲಿ ನೀರಿನ ಅಂಶ ಚೆನ್ನಾಗಿದ್ದುದರಿಂದ ಬಳಪ ಫುಲ್ ಕ್ಲೀನ್...!
ಮಳೆಗಾಲದ ಮೊದಲ ದಿನಗಳಲ್ಲಿ ಶಾಲೆಗೆ ನಡೆದುಕ್ಕೊಂಡು ಹೋಗುತ್ತಿದ್ದಾಗ ಸಿಗುತ್ತಿದ್ದ ’ದೇವರ ತುಪ್ಪಲು’ ಅನ್ನುತ್ತಿದ್ದ ಕೆಂಪು ಬಣ್ಣದ ಸಣ್ಣ ಜೀವಿಯ ಮೈ ಬಣ್ಣ ನೋಡುವುದೇ ಒಂದು ಚಂದ...
ಶಾಲೆಯಲ್ಲಿ ಆಡುತ್ತಿದ್ದ ಕಬಡ್ಡಿ, ಲಗೋರಿ, ತಲೆಮಾ, ಅಪ್ಪಚ್ಚೆಂಡು, ಚಿನ್ನಿದಾಂಡು, ಕಣ್ಣು ಮುಚ್ಚಾಲೆ ಮುಂತಾದ ಸಾಂಪ್ರದಾಯಿಕ ಆಟಗಳೇ ಎಷ್ಟೊಂದು ಖುಷಿಕೊಡುತ್ತಿತ್ತು...
ಮನೆಯಲ್ಲಿ ಆಡುತ್ತಿದ್ದ ಚೆನ್ನಮಣೆ, ಜಿಬ್ಲಿ, ಗೇರುಬೀಜ ಚುಟ್ಟುವುದು, ಸ್ಯಾಟ್... ವಾವ್.. ಅದೆಲ್ಲ ಅಷ್ಟೊಂದು ಸುಂದರ ದಿನಗಳಾಗಿದ್ದವು...
ತೀರಾ ಅಪರೂಪವೆನ್ನುವಂತೆ ನಮ್ಮದೇ ವಯಸ್ಸಿನ ಹುಡುಗರು ಸೈಕಲ್ ತುಳಿದುಕ್ಕೊಂಡು ಬಂದರೆ, ಶಾಲೆಗೆಲ್ಲಾ ಅವನೇ ಹೀರೋ...
ಅಸೂಯೆ ಪಟ್ಟುಕ್ಕೊಂಡು ಅವನ್ನೇ ನೋಡೂತ್ತಿದ್ದೇವಲ್ವಾ...
ಪಯಸ್ವಿನಿ ನದಿಗೆ ಈಜಲು ಹೋಗುವುದೆಂದರೆ ಕುಣಿದು ಕುಪ್ಪಳಿಸುತ್ತಿದ್ದೆ...

ಒಂದನೇ ತರಗತಿಯಲ್ಲಿ ನನ್ನ ಅಮ್ಮಣ್ಣಿ ನನ್ ಪಕ್ಕದಲ್ಲೇ ಕುಳಿತುಕ್ಕೊಳ್ಳುತ್ತಿದ್ದಳು. ನಾವಿಬ್ರೂ ಜೊತೆಗೇ ಆಟವಾಡುತ್ತಿದ್ದೆವು. ಆಕೆ ಮನೆಯಿಂದ ತಿಂಡಿ ತಂದರೆ ನನ್ ಜೊತೆ ಹಂಚಿಕ್ಕೊಳ್ಳುತ್ತಿದ್ದಳು. ನಾನೂ ಹಾಗೇ, ಅಪ್ಪನ ಕಿಸೆಯಿಂದ ಕದ್ದ ದುಡ್ಡಿನಲ್ಲಿ ಆಕೆಗೂ ಮಿಟಾಯಿ, ಚೊಕೋಲೇಟ್ ಕೊಡಿಸುತ್ತಿದ್ದೆ(ಪಾಕೆಟ್ ಮನಿ ಅನ್ನುವ ಕಾಂಸೆಪ್ಟ್ ಇರಲಿಲ್ಲ ಬಿಡಿ ಆ ಕಾಲದಲ್ಲಿ, ಹೀಗೇನಾದ್ರು ಕಿತಾಪತಿ ಮಾಡಿದ್ರೆ ಮಾತ್ರ ಎರಡು ಚಿಲ್ರೆ ಕಾಸು ದಕ್ಕುತ್ತಿತ್ತು!). ಈವತ್ತು, ಹತ್ತಿಪ್ಪತ್ತು ವರುಷದ ನಂತರವೂ, ಆಕೆಯನ್ನು ನೆನೆಸಿಕ್ಕೊಳ್ಳುವ ಷ್ಟು ಆಕೆ ಆತ್ಮೀಯಳಾಗಿದ್ದಳು. ಆದರೆ ಒಂದನೇ ತರಗತಿಯ ವೆಕೇಷನ್ ಮುಗಿದು, ಎರಡನೇ ತರಗತಿಗೆ ಹೋದಾಗ ಆಕೆ ಕಾಣಲಿಲ್ಲ. ಒಂದು ದಿನ ನನ್ನ ಅಣ್ಣನಲ್ಲಿ ಆಕೆಯ ಬಗ್ಗೆ ವಿಚಾರಿಸಿದಾಗ, ಆಕೆಯ ಫ್ಯಾಮಿಲಿ ನಮ್ಮೂರ ಬಿಟ್ಟು ಬೇರೆ ಕಡೆ ಶಿಫ್ಟ್ ಆಗಿ ಹೋದುದಾಗಿ ಹೇಳಿದರು. ಅಮೇಲೆ ಆಕೆಯನ್ನು ಈವರೆಗೆ ನೋಡಿಲ್ಲ. ಈವತ್ತೂ ಯವುದಾದ್ರು ಗುಂಪನ್ನು ನೋಡಿದಾಗ ಆಕೆಯ ನೆನಪಾಗುತ್ತೆ. ನನ್ನ ಕಣ್ಣುಗಳು ಆಕೆಗಾಗಿ ಆ ಗುಂಪಿನಲ್ಲಿ ಹುಡುಕಾಡ್ತವೆ.
♫ ಈ ಕಂಗಳ ಮುಂಬಾಗಿಲು
ನಿನಗಾಗಿಯೆ ತೆರೆದಿರಲು
ತಡವೇತಕೆ ಅಮ್ಮಣ್ಣೀ
ನನ್ನಿದುರಿಗೆ ಬರಲು...
ನೀ ನನ್ನೆದುರಿಗೆ ಬರದಿರಬಹುದು. ಆದ್ರೆ, ನಾನಿನ್ನೂ ಅದೇ ಊರನವನೇ ಆಗಿರುವುದರಿಂದ, ಯಾರನ್ನಾದರೂ ಕೇಳಿ ನನ್ ಫೋನ್ ನಂಬರ್ ತೆಗೆದುಕ್ಕೊಂಡು, ನನಗೊಂದು ಕಾಲ್ ಮಾಡಬಹುದಿತ್ತಲ್ಲಾ... ಹೋಗ್ಲಿ, ಓರ್ಕುಟ್, ಫೇಸ್ ಬುಕ್ ನಲ್ಲಾದರೂ ಒಂದು ಪ್ರೊಫೈಲ್ ಕ್ರಿಯೇಟ್ ಮಾಡ್ಬಹುದಿತ್ತಲ್ಲಾ.ಯಾಕೆ ಅಮ್ಮಣ್ಣೀ ನನ್ ಹೃದಯದ ಮಿಡಿತ ಕೇಳಿಸಲ್ವಾ...?
ತುಂಬಾ ಸುಂದರವಾಗಿ ಆ ಬಾಲ್ಯದ ದಿನಗಳನ್ನು ಬರೆದಿದ್ದಿರಾ
ಪ್ರತ್ಯುತ್ತರಅಳಿಸಿನನಗೂ ನನ್ನ ಬಾಲ್ಯದ ದಿನಗಳು ನೆನಪಿಗೆ ಬಂದವು
ಅದೊಂದು ಎಂಥ ಸುಂದರ ದಿನಗಳಾಗಿದ್ದವು ಆಲ್ವಾ
ಹಳೆಯ ನೆನಪುಗಳು ಮಧುರವಾಗಿರುತ್ತವೆ, ಅಲ್ಲವೆ?
ಪ್ರತ್ಯುತ್ತರಅಳಿಸಿgiri, bahala sundaravada baraha..
ಪ್ರತ್ಯುತ್ತರಅಳಿಸಿdevara tuppalu emba sanna krimiyannu auto riksha anta kareyutta, balapada mele adu odaduvudannu noduttidda sundara nenapu kannedurige bantu...
Guy, I am telling u now only one day u will become writer like chetan bhagath :-) I wonder how u will find time in your so called busy schedule? Great work. keep up the great work.
ಪ್ರತ್ಯುತ್ತರಅಳಿಸಿhey man.. nice one supper recalling of an old memories...next time do one thing write related to SKDB...our supper ejoying room...once i gone to my sweeet golden days of those....primary school days... keep it up... bless from side grow up in both format (work/writing) all the best..
ಪ್ರತ್ಯುತ್ತರಅಳಿಸಿhey man. supper one nice recalling of those golden memories... keep it up once i gone to my primary school days..by reading this... bless from my side grow in both format both work/writing. all the best
ಪ್ರತ್ಯುತ್ತರಅಳಿಸಿnice.....
ಪ್ರತ್ಯುತ್ತರಅಳಿಸಿಹೆಚ್ಚು ಕಡಿಮೆ ನನ್ನ ಶಾಲಾದಿನಗಳೂ ಇದೇ ಥರ ಇತ್ತು.
ಪ್ರತ್ಯುತ್ತರಅಳಿಸಿಮತ್ತೊಮ್ಮೆ ನಾನು ಶಾಲೆಗೆ ಹೋಗುವವನಾದೆ.. ಒಂದು ಕ್ಷಣ.. ಕತೆಯೊಂದಿಗೆ..! :)
ಬಾಲ್ಯದ ನೆನಪುಗಳೇ ಹಾಗೆ.. ಚಾಕೊಲೇಟಿನಂತೆ ಮೆದ್ದಷ್ಟೂ ಸವಿಯೆನಿಸುತ್ತದೆ. ಚೆನ್ನಾಗಿದೆ ನಿಮ್ಮ ನೆನಪುಗಳ ಹಂಚಿಕೆ. ಅದರಲ್ಲೂ ವಿಶೇಷವಾಗಿ ನನಗೆ ಇಷ್ಟವಾಗಿದ್ದು, ನೀರುಕಡ್ಡಿಯ ಬಳಕೆ. ನಾವೂ ಬಳಸುತ್ತಿದ್ದೆವು. ಅದನ್ನು ಸ್ಲೇಟಿಗೆ ತಿಕ್ಕಿದಾಗ ಒಂಥರ ವಿಚಿತ್ರ ವಾಸನೆ ಹೊಮ್ಮುತ್ತಿತ್ತು. ಅಹ್.. ಆ ಪರಿಮಳ ಇನ್ನೂ ಮನದಲ್ಲಿ ಘಮ ಘಮ :)
ಪ್ರತ್ಯುತ್ತರಅಳಿಸಿಧನ್ಯವಾದಗಳು ನೆನಪಿಸಿದ್ದಕ್ಕೆ.
poovadka matte mullleria da kelagina shale nenapagthade... ninna ammani paapu ninge sigali endu haarisuva...
ಪ್ರತ್ಯುತ್ತರಅಳಿಸಿಚೆನ್ನಾಗಿ ಬರೀತಿರ.
ಪ್ರತ್ಯುತ್ತರಅಳಿಸಿಆದ್ರೆ ನಂಗೊಂದು ವಿಷಯ ಸ್ಪಷ್ಟ ಆಗ್ಲಿಲ್ಲಾ.. ನಿಮ್ಮ ಅಮ್ಮಣ್ಣಿ ನಿಮ್ಮ ಜೊತೆ 7ನೇ classನಲ್ಲೂ ಇದ್ರಲ್ಲಾ? ಮತ್ತೆ 1ನೇ ತರಗತಿಯ ನಂತರ ನೋಡೆ ಇಲ್ಲಾ ಅಂತಿದೀರಲ್ಲಾ?