ಶುಕ್ರವಾರ, ಫೆಬ್ರವರಿ 13, 2009

ಓ ಫೆಬ್ರವರಿ, ನೀನೇಕೆ ತುಂಬಾ ಕೆಂಪು ಕೆಂಪು...?ಓ ಫೆಬ್ರವರಿ,
ನಿನ್ನ ಕಾಯುತಿದೆ
ಬಹುದಿನಗಳ ಕನಸು...

ನಡೆಯುತಲಿ ಬೀದಿಯಲಿ
ನಿನ್ನೇ ನೆನೆಯುತಿದೆ
ಕಾಣದಾ ಮನಸು...
ಉದುರಿದೆಲೆಯಲ್ಲಿ
ನಿನ್ನ ಮೊಗ ಕಂಡು
ಕಾಲೆರಡು ಮೈ ಮರೆಯುತಿವೆ...
ಸುಳಿವ ಗಾಳಿಯಲಿ
ನಿನ್ನ ನಗು ಕಂಡು
ಕಣ್ಣು ಮಿನುಗುತಿದೆ...
ಸಂಜೆಯಲಿ ರವಿ ಕೆಂಪು
ನಿನ್ನ ಕೆನ್ನೆಯ ತುಂಬ
ನವಿರಾದ ತಂಪು...
ಬಿಳಿಯ ಮೋಡಗಳೇ
ಬಳಿಬಂದು ಕೊಡುತಿಹವು
ನಿನ್ನ ಓಲೆಗಳು...
ಬಿಡಿಸಿ ನೋಡಲು ನಾನು
ಮಳೆಯ ಹನಿಗಳು ಬಿದ್ದು
ಕದ್ದು ಓಡುತಿವೆ...
ಮುಸ್ಸಂಗೆ ನನಕಂಡು
ಅಂತರಂಗದ ಬಯಕೆ
ನಡೆಯಲಿಹುದು ಎನ್ನುತಿದೆ...
ಮರೆಯ ಮೋಡದ ನಡುವೆ
ಚಂದಿರನ ಕಂಡು
ಮನಸು ಕಾಡುತಿದೆ...
ಓ ಫೆಬ್ರವರಿ,
ನೀನೇಕೆ ತುಂಬಾ
ಕೆಂಪು ಕೆಂಪು...?

1 ಕಾಮೆಂಟ್‌:

  1. ಗಿರಿ ಸರ್..ನಮಸ್ತೆ. ನನ್ ಪುಟ್ಟ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿ ಕವನ ಬರೆಯುತ್ತಿರಿ,...ಓದಿ ಖುಷಿಗೊಂಡೆ ಅಷ್ಟೇ ಹೇಳಬಲ್ಲೆ. ಯಾಕಂದ್ರೆ ನಂಗೆ ಕವನ ಬರೆಯಕೆ ಬರಲ್ಲ, ಓದಿ ಅನುಭವಿಸ್ತೀನಿ ಅಷ್ಟೆ. ಇನ್ನು ಬರ್ತಾ ಇರ್ತೀನಿ. ಶುಭವಾಗಲಿ
    -ಧರಿತ್ರಿ

    ಪ್ರತ್ಯುತ್ತರಅಳಿಸಿ