ತಾರಸಿಯ ಮೇಲೊಂದು
ಕಲ್ಲು ಬೆಂಚಲಿ ಕುಳಿತು
ಮೇಲೆ ನೋಡುತಿರೆ
ದೊಡ್ಡ ಬಟ್ಟಲ ಚಂದಿರನಿಂದು...
ಹುಣ್ಣಿಮೆಯ ಚಂದಿರನೆ
ನೀನಿಂದೇತಕೋ ಹೊಳಪು?
ಮೈತುಂಬ ಗಂಧ ಅರಸಿನ
ಪೂಸಿರುವೆಯಾ...?
ಮನವೆಲ್ಲ ಕನಸಿನಾ ಕನ್ಯೆ
ನಾನರಿಯೆ ಅವಳಿರುವು,
ಹುಡು-ಹುಡುಕಿ ಬರುತಿಹುದು ಉಬ್ಬಸವು
ದೀರ್ಘವಾದ ನಿಶ್ವಾಸವೂ...
ಪೂರ್ಣ ಚಂದಿರನೇ, ಜಗದ
ಚಂದ ನೋಡುತಿಹೆಯೇ,
ನೀ ನೋಡದೊಂದು ಕಣವಿಲ್ಲ
ನಿನ್ನ ನೋಡದ ಒಂದು ಹುಳವಿಲ್ಲ...
ಹುಣ್ಣಿಮೆಯ ಹೊಂಬೆಳಕು
ಮನವೆಲ್ಲ ಕಂಗೊಳಿಸಿ
ನನ್ನ ಹುಡುಕುತಿಹಳೇ
ನನ್ನಂತೆ ಅವಳೂ...?
ಬೀಸುತಿಹ ತಂಗಾಳಿಯಲಿ
ಕಣ್ಣು ಮಿಟುಕಿಸದೆ
ಅವಳೂ ನೋಡುತಿರೆ ನಿನ್ನ
ಹೇಳುವೆಯಾ ನನ್ನ ಮನವನ್ನಾ...?
ಕುಡಿ ಮೀಸೆ ಪುಡಿ ಆಸೆ
ನೀಳಕಾಯದ ನನ್ನ
ಉದ್ದ ಮೂಗಿನ ಬಳುಕು
ಹೇಳದಿರು ಹುಳುಕು...
ತುಂಬಾ ಹೊತ್ತು ಹಾಯದಿರು
ಮತ್ತೆ ಅವಳೆದುರು,
ನನ್ನ ವರ್ಣಿಸಿ ಮರೆಯಾಗು
ಇಲ್ಲಾ ದೂರ ಹೋಗು...
ನಿನ್ನ ಅಂದಕೆ ಮನಸೋತು
ನೋಡದಾದರೆ ನನ್ನ ಅವಳು,
ದಯವಿಟ್ಟು ಮರಳಿ ಬರದಿರು ನಾಳೆ
ಹೀಗೇ ಬಾಯಿ ಅಗಲ ಬಿಟ್ಟು...
ಗಿರಿ,
ಪ್ರತ್ಯುತ್ತರಅಳಿಸಿಚಂದ್ರನ ಕುರಿತಾದ ಕವನ ಚೆನ್ನಾಗಿದೆ....ಜೊತೆಗೆ ಪ್ರೇಯಸಿಯ ನೆನಪು ಮೇಳೈಸಿದೆ...
ನಿನ್ನ ಅಂದಕೆ ಮನಸೋತು
ನೋಡದಾದರೆ ನನ್ನ ಅವಳು,
ದಯವಿಟ್ಟು ಮರಳಿ ಬರದಿರು ನಾಳೆ
ಹೀಗೇ ಬಾಯಿ ಅಗಲ ಬಿಟ್ಟು...
ಸಾಲುಗಳು ಚೆನ್ನಾಗಿವೆ....
ಮತ್ತೆ ನನ್ನ ಬ್ಲಾಗಿನಲ್ಲಿ "ಪೇಪರ್ ಬಿಲ್ಲು ಹೋಯ್ತು.........ಕ್ಯಾಟರ್‌ಪಿಲ್ಲರ್ ಬಂತು....ಡುಂ..ಡುಂ...!! ಹೊಸ ಲೇಖನವನ್ನು ನೋಡಿ enjoy ಮಾಡಿ ಇಷ್ಟವಾದರೆ ನಾಲ್ಕು ಮಾತು ಕಾಮೆಂಟು ಹಾಕಿ....
ಗಿರೀಶ್ ಅವರೆ...
ಪ್ರತ್ಯುತ್ತರಅಳಿಸಿತುಂಬ ಸೊಗಸಾಗಿದೆ.
"ಪೂರ್ಣ ಚಂದಿರನೇ, ಜಗದ
ಚಂದ ನೋಡುತಿಹೆಯೇ,
ನೀ ನೋಡದೊಂದು ಕಣವಿಲ್ಲ
ನಿನ್ನ ನೋಡದ ಒಂದು ಹುಳವಿಲ್ಲ..."
ಈ ಸಾಲುಗಳು ಇನ್ನಷ್ಟು ಇಷ್ಟವಾದವು.
...ಚೆನ್ನಾಗಿದೆ
ಪ್ರತ್ಯುತ್ತರಅಳಿಸಿಗಿರಿ ಸರ್....
ಪ್ರತ್ಯುತ್ತರಅಳಿಸಿತುಂಬಾ ಚೆನ್ನಾಗಿ ಬರೇತೀರಿ ಸರ್. ಕವನ ಚೆನ್ನಾಗಿದೆ.
-ಧರಿತ್ರಿ
ಕವನ ಸೊಗಸಾಗಿದೆ. ಚಿತ್ರವೂ ಚೆನ್ನಾಗಿದೆ. ‘ಅಕ್ಕ’ ನಿಗೆ ನೀವು ಬರೆದ ಚಿತ್ರ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿ@shivu
ಪ್ರತ್ಯುತ್ತರಅಳಿಸಿಶಿವಣ್ಣಾ,
ಕವನ ಮೆಚ್ಚಿದ್ದಕ್ಕೆ ಸಂತೋಷವಾಯ್ತು... ನಿಮ್ಮ ಪ್ರೋತ್ಸಾಹಕ್ಕೆ ಅಭಾರಿ..
@ಶಾಂತಲಾ ಭಂಡಿ
ಶಾಂತಲಕ್ಕ,
ನೀವು ನನ್ನ ಕವನ ಮೆಚ್ಚಿದ್ದಕ್ಕೆ ಖುಷಿ ಆಯ್ತು... ಹೀಗೇ ಬರುತ್ತಾ ಇರಿ...
ಧನ್ಯವಾದಗಳು..
@ಕಾರ್ತಿಕ್ ಪರಾಡ್ಕರ್
ಧನ್ಯವಾದಗಳು ಕಾರ್ತಿಕ್... ಹೀಗೇ ಬರುತ್ತಾ ಇರಿ...
@ಧರಿತ್ರಿ
ಧರಿತ್ರಿಯವರೇ,
ಕವನ ಮೆಚ್ಚಿದ್ದಕ್ಕೆ ಖುಷಿ ಆಯ್ತು... ಹೀಗೇ ಬರುತ್ತಾ ಇರಿ...
ಧನ್ಯವಾದಗಳು.
@sunaath
ಸುನಾತ್,
ಕವನ ಮೆಚ್ಚಿದ್ದಕ್ಕೆ ಸಂತೊಷವಾಯ್ತು... ಎರಡೂ ಚಿತ್ರಗಳನ್ನು ನಾನು ಬರೆದದ್ದಲ್ಲ.. ಅದನ್ನ್ನು ಅಂತರ್ ಜಾಲದಿಂದ ಎರವಲು ಪಡೆದದ್ದು...!
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಹೀಗೇ ಬರುತ್ತಾ ಇರಿ...
-ಗಿರಿ