ಬುಧವಾರ, ಏಪ್ರಿಲ್ 8, 2009

ಪುಳಕಗೊಂಡ ಈ ಕೋಗಿಲೆಯ ಹಾಡು ಸಾಕೇ...?


ನಿನ್ನ ಕೆನ್ನೆಯ 
ಬೆಣ್ಣೆ ನುಣುಪಿಗೆ
ಉಪಮೆ ಹೇಳಲು 
ವೆನಿಲ್ಲಾ ಐಸ್ ಕ್ರೀಂ ಸಾಕೇ...?

ನಿನ್ನ ತುಟಿಯಂಚಿನ
ಕಿರು ನಗೆಗೆ
ಉಪಮೆ ಹೇಳಲು
ರಾತ್ರೆ ಬಿರಿವ ಮಲ್ಲಿಗೆ ಸಾಕೇ...?

ಕಣ್ಣು ಕುಗ್ಗಿಸಿ, ಕೊರಳು ಬಗ್ಗಿಸಿ
ಒಲಿಯುವಾ ಮುಗುಳು ನಗೆಗೆ
ಉಪಮೆ ಹೇಳಲು
ಬೆಳಕ ತರುವ ಉಷಾಕಿರಣ ಸಾಕೇ...? 

ನಿನ್ನ ಕಣ್ಣ ತುಂಬಿಹರಿವ
ಮಧುರ ಕಾವ್ಯಕೆ
ಉಪಮೆ ಹೇಳಲು, ಪುಳಕಗೊಂಡ
ಈ ಕೋಗಿಲೆಯ ಹಾಡು ಸಾಕೇ...?

15 ಕಾಮೆಂಟ್‌ಗಳು:

  1. Ninu nijawagloo "UPAMA-BHAYANKARA"

    Ninge kavyanama kuda UPAMA-BHAYANKARA anthale idbahudu.. :-)

    ಪ್ರತ್ಯುತ್ತರಅಳಿಸಿ
  2. ಗಿರಿಯವರೆ,
    ಒಳ್ಳೆಯ ಹಾಡು, ನಾವು ಪುಳಕಿತರಾಗಿಬಿತ್ವಿ,

    ಪ್ರತ್ಯುತ್ತರಅಳಿಸಿ
  3. @PUTTA [PRASAD]
    ಪ್ರೀತಿಯ ಪ್ರಸಾದ್...
    ನೀನು ಕೊಟ್ಟ ವಿಷೇಶಣೆಯನ್ನು ಭದ್ರವಾಗಿ ನನ್ನ ಹಣೆಯಮೇಲೆ ಹಚ್ಚೆ ಹಾಖಿಸಿದ್ದೇನೆ.ಮತ್ತೊಮ್ಮೆ ಬಾ... ನೀನು ನನ ಬ್ಲಾಗಿಗೆ ಭೇಟಿ ಇತ್ತು, ಇಷ್ಟಪಟ್ಟಿದ್ದಕ್ಕೆ ಖುಶಿ ಆಯ್ತು...

    @ಸಾಗರದಾಚೆಯ ಇಂಚರ
    ಗುರುಮೂರ್ತಿಯವರೇ,
    ನೀವು ಪುಳಕಿತರಾದದ್ದು ಕೇಳಿ ಖುಶಿ ಆಯ್ತು... ಮೆಚ್ಚಿ ಕಾಮೆಂಟ್ ಬರೆದದ್ದಕ್ಕೆ ಧನ್ಯವಾದಗಳು.... ಮತ್ತೊಮ್ಮೆ ಬನ್ನಿ,

    @sunaath
    ಸುನಾತ್,
    ಮೆಚ್ಚಿ ಕಾಮೆಂಟ್ ಬರೆದದ್ದಕ್ಕೆ, ಪ್ರೊತ್ಸಹಿಸಿದ್ದಕ್ಕೆ ಧನ್ಯವಾದಗಳು.... ಮತ್ತೊಮ್ಮೆ ಬನ್ನಿ...

    @hemashree
    ಹೇಮಶ್ರೀ,
    ಆ ಮಗುವಿನ ಭಾವಚಿತ್ರ - ಅವಳು ನನ್ನ ಅಣ್ಣನ ಮಗಳು - ಶ್ರೀಜಾ...
    ನೀವು ಕವನ ಮೆಚ್ಚಿದ್ದಕ್ಕೆ ಸಂತೋಷವಾಯ್ತು... ಧನ್ಯವಾದಗಳು...

    @ಸಂದೀಪ್ ಕಾಮತ್
    ಸಂದೀಪ್,
    ಆಕೆ ನನ್ನ ಅಣ್ಣನ ಮಗಳು - ಶ್ರೀಜಾ...
    ಅವಳ ಪಿಕಿಲಾಟಗಳೇ ಬಲು ಜೋರು...
    ಮುದ್ದು ಮನಸಿನ ಮುಗ್ಧ ಹುಡುಗಿ..
    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. ಗಿರಿ,

    ನಿಮ್ಮ ಸುಂದರ ಮಗುವಿನ ಚಿತ್ರ ಮತ್ತು ಅದಕ್ಕೆ ತಕ್ಕ ಸೊಗಸಾದ ಕವನ ಹೊಗಳಲು..

    ನನ್ನ ಮನದಲ್ಲಾದ ಖುಷಿಯನ್ನು ಹೇಳಲು
    ಕೈಬೆರಳು, ಕೀಲಿಮಣೆ ಸಂಯೋಗದಿಂದ
    ಮಾನಿಟರ್ ಮೇಲೆ ಮೂಡಿದ ಅಕ್ಷರಗಳೇ ಸಾಕೇ!

    ಇದಕ್ಕಿಂತ ಬೇರೇನು ಹೇಳಲು ಆಗದು ಅಷ್ಟು ಸುಂದರವಾಗಿವೆ ಚಿತ್ರಮತ್ತು ಕವನ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  5. ಗಿರಿಯವರೆ,
    ಚಂದದ ಚಿತ್ರ ಮತ್ತು ಕವನ.ಹೆಚ್ಚಿಗೆ ಬರೆಯಲು ಪದಗಳು ಸಾಲದು.

    ಪ್ರತ್ಯುತ್ತರಅಳಿಸಿ
  6. @shivu

    ಶಿವಣ್ಣಾ,

    ನೀವು ಕವನ ಮೆಚ್ಚಿದ್ದಕ್ಕೆ ತುಂಬಾ ಸಂತೊಷವಾಯ್ತು. ಜೊತೆಗೆ ನೀವು ಚಿತ್ರವನ್ನೂ ಮೆಚ್ಚಿದ್ದರಿಂದ, ನಿಮಗೆ ಆ ಚಿತ್ರದ ಸಂದರ್ಭವನ್ನು ತಿಳಿಸಿದರೆ ಉಚಿತವೆಂದು ಅನಿಸುತ್ತಿದೆ. ಆಕೆ ನನ್ನ ಅಣ್ಣನ ಮಗಳು - ಶ್ರೀಜಾ. ಅಣ್ಣನ ಮಗಳ ಜೊತೆ ಇನ್ನೊಬ್ಲು ೪ ವರ್ಷದ ಮಗು ವರಾಂಡದಲ್ಲಿ ಆಟವಾಡುತ್ತಿತ್ತು. ನಾನು ಅವರ ಮುಗ್ಧತೆಗೆ ಧಕ್ಕೆ ಬಾರದಂತೆ, ಅವರರಿವಿಗೆ ಬಾರದಂತೆ ಫೊಟೊ ಕ್ಲಿಕ್ಕಿಸಬೇಕೆಂದಿದ್ದೆ. ಆದರೆ ನನ್ನ ಅಣ್ಣನ ಮಗಳು ಆ ಕ್ಷಣದಲ್ಲಿ ಮನೆಯೊಳ ಹೋಗಲು ತಿರುಗಿದಳು. ತಕ್ಷಣ ನಾನು ಅವಳನ್ನು "ಶ್ರೀ..." ಅಂತ ಕರೆದಾಗ ಹಿಂದಕ್ಕೆ ತಿರುಗಿ ನನ್ನನ್ನು ನೋಡಿದಳು. ಆ ಕ್ಷಣದಲ್ಲಿ ಕ್ಲಿಕ್ಕಿಸಿದ್ದೆ....
    ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ...

    ಪ್ರತ್ಯುತ್ತರಅಳಿಸಿ
  7. @ಮಲ್ಲಿಕಾರ್ಜುನ.ಡಿ.ಜಿ.

    ಮಲ್ಲಿಕರ್ಜುನ್,

    ನೀವು ಕವನ ಮತ್ತು ಚಿತ್ರ ಮೆಚ್ಚಿದ್ದಕ್ಕೆ ಖುಷಿಯಾಯ್ತು. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... ಮತ್ತೊಮ್ಮೆ ಬನ್ನಿ..

    ಪ್ರತ್ಯುತ್ತರಅಳಿಸಿ
  8. ಗಿರಿಯವರೆ...

    ಬಹಳ ಸುಂದರ ಫೋಟೊ...
    ಚಂದದ ಕವನ...
    ಇಲ್ಲಿಗೆ ಬರದಿದ್ದರೆ ಮಿಸ್ ಮಾಡ್ಕೊತ್ತಿದ್ದೆ...

    ಇಷ್ಟವಾಯಿತು...

    ಅಭಿನಂದನೆಗಳು...

    ಪ್ರತ್ಯುತ್ತರಅಳಿಸಿ
  9. @ಸಿಮೆಂಟು ಮರಳಿನ ಮಧ್ಯೆ
    ಪ್ರಕಾಶ್,

    ನೀವು ನನ್ನ ಕವನ ಮತ್ತು ನನ್ನ ಅಣ್ಣನ ಮಗಳು- ಶ್ರೀಜಾ ಫೋಟೋ ಇಷ್ಟಪಟ್ಟಿದ್ದಕ್ಕೆ ಖುಶಿ ಆಯ್ತು. ಧನ್ಯವಾದಗಳು... ಇಲ್ಲಿಗೆ ಬರದಿದ್ರೆ ಮಿಸ್ ಮಾಡ್ಕೊಳ್ತಾ ಇದ್ದೆ ಅಂದ್ರಲ್ಲಾ... ನಾನು ನಿಮಗೆ ಅಭಾರಿ...
    ಹೀಗೇ ಬರುತ್ತಾ ಇರಿ...

    ಪ್ರತ್ಯುತ್ತರಅಳಿಸಿ
  10. ಓದಿ ಖುಷಿಡಲು ಕವನ, ನೋಡಿ ಕಣ್ತುಂಬ ತುಂಬಿಕೊಳ್ಳಲು ಪುಟ್ಟ ಮಗು...ಕವನ ಬರೆಯಲು ಬಾರದ ನನ್ನಂಥ ದಡ್ಡರೂ ಮತ್ತೊಮ್ಮೆ ಓದುತ್ತಾರೆ ಆ ಮಗುವನ್ನಾದರೂ ನೋಡಿ! ಸುಂದರ ಕವನಕ್ಕೆ ಅಭಿನಂದನೆಗಳು
    -ಧರಿತ್ರಿ

    ಪ್ರತ್ಯುತ್ತರಅಳಿಸಿ
  11. ಧರಿತ್ರ್ಹಿ...

    ಓ, ನನಗೆಷ್ಟು ಖುಷಿ ಆಗ್ತಾ ಇದೆ ಅಂತ ಗೊತ್ತುಂಟಾ? ತುಂಬಾ ತುಂಬಾ ಧನ್ಯವಾದಗಳು...
    ಮತ್ತೆ, ನಿಮ್ಮನ್ನು ದಡ್ಡ ಅಂತ ಕರ್ದು ನನ್ನನ್ನು ಶತದಡ್ಡ ಅಂತ indirect aagi ಕರೆದದ್ದು ನಂಗೆ ಗೊತ್ತಾಯ್ತು. ಹಾಗೆ ಕರೆಯಲಿರುವ ನಿಮ್ಮ ಪಿತೂರಿಯ ಹುನ್ನಾರಕ್ಕೆ ಚುನಾವಣೆಯ ಈ ಸಮಯದಲ್ಲಿ ನನ್ನ ಬ್ಲಾಗ್ ಗೆ ಬರುವವರ ಸಂಖ್ಯೆ ಏನಾದ್ರು ಕಮ್ಮಿ ಆದಲ್ಲಿ ನಿಮ್ಮ ಬಗ್ಗೆ ಅಯೊಗಕ್ಕೆ ದೂರು ಸಲ್ಲಿಸಬೇಕಾಗುವುದು...!

    ಹೀಗೇ ಬರುತ್ತ ಇರಿ ಧರಿತ್ರಿಯವರೇ,
    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  12. ನಿಮ್ಮ ಕವನ ನೋಡಿದ್ರೆ ಯಾರಾದ್ರೂ ಈತ ಶತದಡ್ಡ ಅನ್ನೋಕ್ಕಾಗುತ್ತಾ? ಬಿಡಿ. ನನ್ ಬಗ್ಗೆ ಆಯೋಗಕ್ಕೆ ದೂರು ಕೊಡ್ತೀರಾ? ನನ್ ಮೇಲೆ ಇಷ್ಟು ದೊಡ್ಡ ಆರೋಪನಾ? ಬೇಡಪ್ಪಾ...ಅಂಥ ಅಪರಾಧಿ ಸ್ಥಾನ ನೀಡಬೇಡ್ರೀ. ಮುಂದಿನ ಪೋಸ್ಟ್ ಬೇಗ ರೆಡಿಯಾಗಲೀ....
    -ಧರಿತ್ರಿ

    ಪ್ರತ್ಯುತ್ತರಅಳಿಸಿ