ನಾನು ಎಷ್ಟೊಂದು ಕನಸುಗಳನ್ನು ಕಟ್ಟಿಕ್ಕೊಂಡಿದ್ದೆ ಗೊತ್ತಾ...?
ಬೀದಿಯ ಹಾದಿಯಲಿ ನಡೀವಾಗ, ಊಟ ಮಾಡುವಾಗ, ಸ್ನಾನ ಮಾಡುವಾಗ, ಅಷ್ಟೇಕೆ ದೈನಂದಿನ ಎಲ್ಲ ಚಟುವಟಿಕೆಗಳಲ್ಲಿ ನನ್ನೊಳಗೆ ನೀನಿರ್ತಿದ್ದೆ...
ಬೆಳಿಗ್ಗೆ ಎದ್ದಾಗ ಅಂದ್ಕೊಳ್ತಿದ್ದೆ...ನೀನಿರ್ತಿದ್ರೆ ನನ್ನೆದುರಿಗೆ, ಒಂದು ಕಾಫಿ ಕಪ್ ಹಿಡಿದು... ಓಹ್...
ನಿನ್ನೆ ರಾತ್ರೆ ನಾನು ಮತ್ತು ಅಮ್ಮ ಹೋಟೆಲ್ ಗೆ ಹೋಗಿದ್ದಾಗ ನೆನಪಾಗಿತ್ತು.... ನೀನಿದ್ದಿದ್ರೆ ನನ್ ಜೊತೆ, ಲಲ್ಲೆಗೆರೆದು ಕಾಡಿ
ಇನ್ನೊಂದು ಐಸ್-ಕ್ರೀಮ್ ತಿನ್ಬೇಕು ಅಂತಿದ್ದೆ...
ನಾನು ಶೇವಿಂಗ್ ಮಾಡುವ ಸಮಯದಲ್ಲೇನಾದ್ರು ನೀನು ಪಕ್ಕದಲ್ಲಿದ್ರೆ, ಶೇವಿಂಗ್ ಕ್ರೀಂನಿಂದ ಆವರಿಸಿಕ್ಕೊಂಡ ನನ್ನ ಗಲ್ಲವನ್ನು ನಿನ್ನ ಕೆನ್ನೆಗೆ ತಾಗಿಸಿ ನಿನ್ನಿಂದ ಒಂದೆರಡು ಒದೆ ಇಸ್ಕೊಳ್ ಬೇಕು...!
ಬೆಳಿಗ್ಗೆ ಸ್ನಾನ ಮಾಡಿ ಬಂದು ನನ್ನ ತಲೆಯನ್ನು ಜೋರಾಗಿ ಆಚೆ-ಈಚೆ ತಿರುಗಿಸಿ ಕೂದಲಿನ ನೀರನ್ನೆಲ್ಲಾ ನಿನ್ ಮೇಲೆ ಎರಚಿಕ್ಕೊಂಡು ನಿನ್ನಿಂದ ಬೈಸ್ಕೋಬೇಕು... ನೀನು ಬೈದಿದ್ದಕ್ಕೆ ಮುಸ್ಸಂಜೆ ತನಕ ನಿಮ್ಮೇಲೆ ಹುಸಿ ಮುನಿಸ ತೋರಬೇಕು... ನನಗಿಷ್ಟವಾದ "ಮುನಿಸು ತರವೇ.. ಮುಗುದೇ..." ಹಾಡು ಹಾಡಿ ನೀ ನನ್ನ ಮುದಗೊಳಿಸಿದಾಗ, ನನ್ನೆದೆಗೆ ನಿನ್ನ ಮುಖವಾನಿಸಿ ಅಪ್ಪಿ ನಿನ್ನ ಹಣೆಗೊಂದು ಚುಂಬನವೀಯಬೇಕು...
ನೀನೇನಾದ್ರು ಕೆಲಸ ಮಾಡುವಾಗ ನಿನ್ನ ಹಿಂದಿನಿಂದ ಬಂದು ನಿನ್ನನ್ನೆಳೆದು ನವಿರಾಗಿ ನಿನ್ನ ಕತ್ತಿಗೆ ಮುತ್ತಿಕ್ಕಬೇಕು...
ನೀ ಅಡುಗೆ ಮಾಡುವಾಗ ನಿನ್ನ ಜಡೆ ಎಳೆಯಬೇಕು...
ನಿನ್ನ ಮುದ್ದು ಮೊಗವನ್ನು ನನ್ನೆದೆಯಲ್ಲಿ ಹುದುಗಿಸಿ, ನಿನ್ನ ಕೆನ್ನೆ ನೇವರಿಸಿ ನನ್ನ ಪ್ರೀತಿಯನ್ನು ಹಂಚಬೇಕು....
ನಿನ್ನನ್ನು ಆವಾಗಾವಾಗ ರೇಗಿಸ್ಕೊಂಡು... ನೀನು ಮುನಿಸು ತೋರಿಸಿದಾಗ ನಿನ್ನನ್ನು ಲಲ್ಲೆ ಗೆರೆಯಬೇಕು... ನಿನ್ನ ಸೆರಗ ಹಿಡಿದು
ರಂಪ ಮಾಡಬೇಕು...
ಸಂಜೆ ನಾ ಆಫೀಸಿಂದ ಬರುವಾಗ ತಡವಾದ್ರೆ, ನೀ ಮುನಿಸದಂತೆ ಒಂದು ಮೊಳ ಮಲ್ಲಿಗೆ ಹೂವನ್ನು ತಂದು ನಿನ್ನ ಮುಡಿಗೇರಿಸಿ, ಸಿಹಿ ಮುತ್ತೊಂದನ್ನು ಇಸ್ಕೊಳ್ಬೇಕು....
ನಿನ್ನ ಮಡಿಲಲ್ಲಿ ನಾ ಮಲಗಿದಾಗ, ನೀನು ಹಾಡುವ ಲಾಲಿ ಹಾಡಿನ ಮಧುರ ಲಯಕ್ಕೆ ನಾ ಮಾರು ಹೋಗಿ ಇಂದ್ರಿಯಗಳ ಎಲ್ಲೆ ಮೀರಿ
ನಿದ್ದೆ ಮಾಡ್ಬೇಕು...
ನೀ ಮಾಡುವ ಕಾಫಿ, ಟೀಗೆ ಸಕ್ಕರೆ ಕಮ್ಮಿಯೆಂದು ಕಾಫಿ ಜೊತೆ ನಿನ್ನ ತುಟಿಯಿಂದ ತಸು ಸಕ್ಕರೆ ಹೀರಬೇಕು...!
ದೂರದಿಂದ ಇಬ್ಬನಿಯ
ಇಳೆಯಂತೆ ಹೋಗದಿರು
ನನ್ನೆದೆಯ ಕದ ತೆರೆದು
ಸ್ವಲ್ಪ ಇಣುಕಿ ನೋಡು
Good One Ranjan, ನಿನ್ನ ಕನಸುಗಳನ್ನು ಬಿಂದಾಸಾಗಿ reveal ಮಾಡಿದ್ದೀಯ. I liked it. ಇವೆಲ್ಲ ಬೇಗ ನನಸಾಗಲಿ ಎಂದು ಹಾರೈಸುತ್ತೇನೆ!
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿನಮಸ್ಕಾರ ಗಿರಿ,
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗಿಗೆ ಮೊದಲ ಬೇಟಿ, ನಿಮ್ಮ ಬರಹ ತುಂಬಾ ಚನ್ನಾಗಿದೆ...
ನಿಮ್ಮ ಕನಸುಗಳು ಬೇಗ ನನಸಾಗಲಿ..
nothing,shivu,ಜ್ಞಾನಮೂರ್ತಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು...
ಪ್ರತ್ಯುತ್ತರಅಳಿಸಿಹೀಗೇ ಬರುತ್ತಿರಿ
-ಗಿರಿ
sakkathagide...nimma kanasina bedagi bega sigali nimage....
ಪ್ರತ್ಯುತ್ತರಅಳಿಸಿhay
ಪ್ರತ್ಯುತ್ತರಅಳಿಸಿyestu hogalidharu saladu realy super,i love and like this.
nanna kanasugalu kuda edhini.........
Regards
shivu
Namaskara Giri Avarige,
ಪ್ರತ್ಯುತ್ತರಅಳಿಸಿTumba chenadide ree...
Nanage tumba Ishta aytu...
Idhe tara baritha iri ok ...
manju.
ತುಂಬ ಭಾವಪೂರ್ಣವಾಗಿದೆ ಬರಹ.
ಪ್ರತ್ಯುತ್ತರಅಳಿಸಿthumba chennagide...anthu ella kanasu kandiddiya....ninage idella nanasu mado hudugi sikkali ...endu haarisuva Vishnu :)
ಪ್ರತ್ಯುತ್ತರಅಳಿಸಿHi Giri,
ಪ್ರತ್ಯುತ್ತರಅಳಿಸಿtumba chennagi barediddira...
Heege munduvaresi...:):)
ಅನಾಮಧೇಯ, KANASUGARA, manju, Vishnu, Divya Hegde...
ಪ್ರತ್ಯುತ್ತರಅಳಿಸಿಸಾಲುಗಳನ್ನು ಮೆಚ್ಚಿದ್ದಕ್ಕೆ ಖುಶಿ ಆಯ್ತು... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.. ಹೀಗೇ ಬರುತ್ತಿರಿ...
-ಗಿರಿ
ಕನಸುಗಳು ನನಸಾಗಲಿ
ಪ್ರತ್ಯುತ್ತರಅಳಿಸಿಕನಸುಗಳು ನನಸಾಗಲಿ
ಪ್ರತ್ಯುತ್ತರಅಳಿಸಿ