ಸೋಮವಾರ, ಜುಲೈ 27, 2009

ಬಾಗಿಲಿಗೆ ಮಾತ್ರ ನೀ ಯಾಕೆ ಬೀಗ ಜಡಿದೆ...?


[ಅರ್ಪಣೆ : ಬರೆಯಲಾರದ ನನ್ನ ಬರೆಸಿಯೇ ತೀರುವೆನೆಂಬ ಹುಂಬಿಗೆ ಬಿದ್ದು, ಛಾಯಾಚಿತ್ರ ಕಳಿಸಿ ಪ್ರಚೊದಿಸಿ, ಯಶವ ಗಳಿಸಿದ ಆತ್ಮೀಯ ಸ್ನೇಹಿತ ವಿಷ್ಣುವಿಗೆ]



ಮನದಲ್ಲಿ ಜೋಕಾಲಿ
ಮುಗಿಲೆಲ್ಲ ನಸು ನೀಲಿ
ಹಸಿರ ಹಾದಿಯ ಅಂಚಿನಲಿ
ಸದಾ ನಿನ್ನ ಛಾಯೆಯಿರಲಿ

ಅಂಗೈಯೊಳಗೆ ಕಿರುಬೆರಳ
ಕನಸ ಕಂಡಿರುವ ನನ್ನ ಮನ
ನಿನ್ನ ಕಣ್ಣಂಚಿಗಿನ ಹನಿಯ
ಒರತೆ ಕಾಣದಿದ್ದೀತೇ?

ದಾಟಲಾರದ ಪ್ರವಾಹವೇನಿದೆ
ಬಂಧನವ ಹೊಕ್ಕುಳಲಿ ತೇಲಿ ಬಿಟ್ಟು
ಮಳೆಯ ಕರಿ ಮುಗಿಲು ಕವಿದಂತೆ
ನಿನ್ನಿರುಳ ನೀನೇ ಮುಸುಕಿದಂತೆ

ಹೂ ಬಿಡದ ಹಸುರಿಲ್ಲ
ಹರಿಯಲಾಗದ ನೀರಿದೆಯೇ?
ತಿಳಿಯಾಗದ ಕೊಳವಿಲ್ಲ
ತಿಳಿಸಲಾಗದ ಮಾತು ಮಾತ್ರ ಇದೆಯೇ?

ಮನಸೆಲ್ಲ ಮುದುಡಿ
ಮನೆಯ ಗೋಡೆಗಳೆಲ್ಲ ಒಡೆದು
ಬಾಗಿಲಿಗೆ ಮಾತ್ರ ನೀ
ಯಾಕೆ ಬೀಗ ಜಡಿದೆ...?

5 ಕಾಮೆಂಟ್‌ಗಳು:

  1. ಛಾಯಾಚಿತ್ರಕ್ಕೆ ಅತ್ಯಂತ ಯೋಗ್ಯವಾದ ಕವನವಿದು.

    ಪ್ರತ್ಯುತ್ತರಅಳಿಸಿ
  2. Vishnu, sunaath...
    ಸಾಲುಗಳನ್ನು ಮೆಚ್ಚಿದ್ದಕ್ಕೆ ಖುಶಿ ಆಯ್ತು... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.. ಹೀಗೇ ಬರುತ್ತಿರಿ...

    -ಗಿರಿ

    ಪ್ರತ್ಯುತ್ತರಅಳಿಸಿ