ಶುಕ್ರವಾರ, ಜನವರಿ 30, 2009

ಇರುಳ ಸುಖ


ಎದೆಗೊಂದು ಮಗು ಅವಚಿ, ಬಸ್ stand ನಲಿ ಕೈ ಚಾಚಿ
ಮೈ ಎಲ್ಲ ಗಬ್ಬೆದ್ದು, ಕೊಳಚೆಯಲಿ ಮಲಗೆದ್ದು
ನರ ನಾಡಿ, ಹೃದಯದಡಿ ಇರುಳ ಸುಖ ಉಂಡವರಿಗೆ
ಶೇರ್ ಮಾರ್ಕೆಟ್ ಸೆನ್ಸೆಕ್ಸ್ ,ಗ್ಲೋಬಲ್ recession
ಮರುಕ ಬರಿಸುವುದೇ...?

ನಿನ್ನೆಯಾ ನೆನಪು ಮಾಸದಾಗಿದೆ
ನಾಳೆಯಾ ಕನಸು ನೋಡದಾಗಿದೆ
ಇಂದಿನಾ ಹಸಿವು ಕಾಣುವುದೇ ಕಣ್ಣಿನಲಿ
ಹಸಿವು ಕಣ್ಣಿನಲೊ, ಮಣ್ಣಿನಲೋ,
ಸರ್ವಾಂಗದಲೋ ಬಲ್ಲರವರವರೆ...

ಮನವೆಲ್ಲ ಕೆಂಪಿರಲು ತನುವೆಲ್ಲ ಕಪ್ಪಿರುಳು
ಸುತ್ತ ಕಾಣುವುದೇ ಬರಿ ನೆರಳು
ನೆರಳೆಂದು ಕುಳಿತೊಂದು ಸಿಹಿ ನಿದ್ದೆಯಿರಲು
ಅವಚಿಕೊಳ ಮತ್ತೊಂದು ಮಗದೊಂದು
ಸುಖಕೊಂದು ಪ್ರತಿಫಲವಿರಲು...

2 ಕಾಮೆಂಟ್‌ಗಳು:

  1. ಎಷ್ಟೊಂದು ಅರ್ಥಪೂರ್ಣ ಕವನ ಗಿರೀಶ್. ಬದುಕಿನ ಇನ್ನೊಂದು ಮುಖ, ನಮ್ಮೆದುರು ಕಾಣುವ ಸತ್ಯವನ್ನು ತೆರೆದಿಟ್ಟಿದ್ದೀರಿ. ಕವನ ಓದುತ್ತಾ ಹೋದಂತೆ ನಾನೇ ಕಣ್ಣೀರಾದೆ. ಯಾರ ಬದುಕುನೂ ಹೀಗಾಗಬಾರದಲ್ವಾ?
    -ಧರಿತ್ರಿ

    ಪ್ರತ್ಯುತ್ತರಅಳಿಸಿ